ಎಸ್. ಪ್ರಕಾಶ್ಚಂದ್ರ ಶೆಟ್ಟಿ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದೇವೆ.
ಕುಂದಾಪುರ : ಬೈಂದೂರು ತಾಲೂಕು , ದಿನಾಂಕ 11 ಜನವರಿ 2025
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನೀ. ಉಪ್ಪುಂದ ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ, ನೇತೃತ್ವದಲ್ಲಿ ರೈತ ಸಹಕಾರಿ ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ ಇದೆ ಬರುವ 12ನೇ ತಾರೀಕಿಗೆ ನಡೆಯಲಿದ್ದು ಒಂದಿಷ್ಟು ಅಪಪ್ರಚಾರಗಳು ನಡೆಯುತ್ತಾನೆ ಇವೆ
ಆರೋಪ ಮಾಡುವುದು ಬಹಳ ಸುಲಭ. 40 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರದ ವಾಸನೆ ಹತ್ತಿರವೂ ಸುಳಿಯದಂತೆ ಬದುಕಿದವರು ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು. ಹಣ ಮಾಡಲು ಕೃಷಿಯೋ, ಉದ್ಯಮವೋ ಇದೆ. ಆದರೆ ಸಾರ್ವಜನಿಕರ ಕ್ಷೇತ್ರದಲ್ಲಿ ಶುದ್ಧರಾಗಿರಬೇಕು ಎಂದೇ ನಂಬಿದವರು.
ಚುನಾವಣೆಯನ್ನು ನೇರವಾಗಿ ಎದುರಿಸಲಾಗದೇ ಈ ರೀತಿಯ ಆರೋಪಗಳನ್ನು ತೇಲಿ ಬಿಟ್ಟು ಜನರ ದಾರಿತಪ್ಪಿಸುವ ಹುನ್ನಾರ ಬಿಟ್ಟುಬಿಡಿ... ನಾಳೆ ಜನವರಿ 11ರ ಬೆಳಿಗ್ಗೆ 8:30ಕ್ಕೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆ. ತಾವುಗಳು ಅವರ ಬಗ್ಗೆ ಹೊರಿಸಿದ ಆರೋಪ ಸತ್ಯವೆಂದು ದೇವರ ಮುಂದೆ ಸಾಬೀತುಪಡಿಸಿ.
ಕಾಮೆಂಟ್‌ಗಳು