"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.
"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.


ದಿನಾಂಕ 15/02/2025 ರ ಶನಿವಾರದಂದು ನಡೆದ ನಮ್ಮ "ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್" ಸಂಸ್ಥೆಯ 2 ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಜಂಟೀ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಲವು ವಿಶೇಷತೆಗಳಿಂದ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ವೇದಮೂರ್ತಿ ಶ್ರೀ ಜಗದೀಶ್ ಭಟ್ ಇವರ ಗೌರವ ಉಪಸ್ಥಿತಿಯಲ್ಲಿ ಸಹಕಾರಿ ದ್ವಯರಾದ ಶ್ರೀ ರಾಜು ಪೂಜಾರಿ ಮತ್ತು ಮೋಹನ್ ಪೂಜಾರಿ ಉಪ್ಪುಂದ, ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅರೆಹೊಳೆ,ಹಿರೀಯ ನಿವೃತ್ತ ಶಿಕ್ಷಕರಾದ ಶ್ರೀ ಮಹಾಬಲ ಮಾಷ್ಟ್ರು, ಉದ್ಯಮಿಗಳಾದ ಶ್ರೀ ಶಿವರಾಜ್ ಪೂಜಾರಿ ಗೋಳಿಹೊಳೆ, ಗೋಪಾಲ್ ಪೂಜರಿ ವಸ್ರೆ, ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀ ಕುಪ್ಪಯ್ಯ ಬಿಲ್ಲವ, ಮತ್ತು ರಾಜೇಶ್ ಕೊಠಾರಿ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆಗೊಂಡಿತು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.
ಇದರ ಮದ್ಯೆ ಕಾರ್ಯಕ್ರಮದ ಪ್ರಾಯೋಜಕರನ್ನು ಗುರುತಿಸುವ ಕಾರ್ಯ, ನಂತರ ವೇದಿಕೆಯಲ್ಲಿನ ಗಣ್ಯರಿಂದ ಕಾರ್ಯಕ್ರಮದ ಆಯೋಜಕರು ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ತಂಡದ ಎಲ್ಲ ಸದಸ್ಯರಿಗೂ ಶುಭ ಹಾರೈಕೆಯ ಆಶೀರ್ವಾದ,ನಂತರ ವೇದಿಕೆ ಮೇಲಿದ್ದ ಮುಖ್ಯ ಅತಿಥಿಗಳಿಂದ ಕಬ್ಬಡ್ಡಿ ಪಂದ್ಯಾಟ ಆಡುವ ಮೂಲಕ ಕಬ್ಬಡ್ಡಿ ಪಂದ್ಯಾಟಕ್ಕೆ ಚಾಲನೆಯನ್ನು ನೀಡಲಾಯಿತು.
ನಂತರ ಪಂದ್ಯಾಟದಲ್ಲಿ ಭಾಗವಹಿದ ಎಲ್ಲ ತಂಡದ ಎಲ್ಲ ಆಟಗಾರರ ಸಹಕಾರದಿಂದ ಬೆಳಿಗ್ಗಿನ ಜಾವದ ವರೆಗೂ ನಡೆದ ಪಂದ್ಯಾಟವು ಯಾವುದೇ ಲೋಪದೋಷಗಳಿಲ್ಲದೇ ಯಶಸ್ವಿಯಾಗಿ ಮುಕ್ತಾಯಗೊಂಡಿತು, ಪಂದ್ಯಾಟದಲ್ಲಿ ಪ್ರಾರಂಭದಿಂದ ಮುಕ್ತಾಯದವರೆಗು ಬಾರೀ ಅಚ್ಚುಕಟ್ಟಾಗಿ ನಿರ್ಣಾಯಕ ತೀರ್ಪುಗಾರರ ಸಹಕಾರ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕೊನೇಯದಾಗಿ ನಡೆಡ ಪೈನಲ್ ಪಂದ್ಯದಲ್ಲಿ ಶ್ರೀ ಬಾಲಾಜಿ ಕ್ಯಾಶು ಎಳಜಿತ ಈ ತಂಡವು ಪ್ರಥಮ ಸ್ಥಾನವನ್ನು ಪಡೆದರೆ ದ್ವಿತೀಯ ಬಹುಮಾನವನ್ನು ಶ್ರೀ ನೀಲಕಂಠೇಶ್ವರ ತಂಡ ಅರೆಹೊಳೆ ಇವರು ಪಡೆದುಕೊಂಡರು.ನಮ್ಮ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಳನ್ನು ಸಲ್ಲಿಸುತ್ತ ಮುಂದಿನ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ, ಎಲ್ಲರಿಗೂ ಧನ್ಯವಾದಗಳು.
ಜಾಹೀರಾತು ಮತ್ತು ಸುದ್ದಿಗಳನ್ನು ಕೊಡಲು ನಮ್ಮನ್ನು ಸಂಪರ್ಕಿಸಿ 9082451853
ಕಾಮೆಂಟ್‌ಗಳು