ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಶಿರೂರುಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕಾಪ್ಸಿನೂರ್ ಮಹಮ್ಮದ್ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಗೌಸ್. ಮಾಜಿ ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಯು .ದಿಲ್ಸದ್ ಬೇಗಂ ಹಾಗೂ ಸ್ಥಳೀಯ ಮುಖ್ಯಸ್ಥರಾದ ಮುಕ್ತಿಯರ್. ಅಲ್ಪಸಂಖ್ಯಾತರ ನಾಯಕರದ ಶಕೀಲ್ ಶಿರೂರು ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀಯುತ ಶಬ್ಬೀರ್ ಬೈಂದೂರ್ ಹಾಗೂ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀಯುತ ವೀರಭದ್ರ ಗಾಣಿಗ ಬೈಂದೂರು,ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಲಕ್ಷ್ಮಣ್ ಬೈಂದೂರು ಜೊತೆ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಮಾಜಿ ಶಾಸಕರಾದ ಗೋಪಾಲ ಪೂಜಾರಿರವರಿಗೆ ವಿಚಾರವನ್ನು ದೂರವಾಣಿ ಮೂಲಕ ತಿಳಿಸಿ ಗ್ರಾಮ ಪಂಚಾಯತ್ ಗ್ರಾಮಾಧಿಕಾರಿಗಳಿಗೆ ಹಾಗೂ ಬೈಂದೂರು ತಾಲೂಕು ತಹಸಿಲ್ದಾರ್ ಅವರಿಗೆ ಪರಿಹಾರವನ್ನು ಈ ಬಡ ಕುಟುಂಬಕ್ಕೆ ನೀಡಬೇಕಾಗಿ ವಿನಂತಿ ಮಾಡಿಕೊಳ್ಳಲಾಯಿತು. ಕುಂದಾಪುರ ಬೈಂದೂರು ಸುದ್ದಿಗಳನ್ನು ಹಾಗೂ ಜಾಹಿರಾತುಗಳನ್ನು ಕೊಡಲು 9082451853